Home

ಕುಮಟಾ : ಹಮ್ಮಿತು ನಾಡು, ಕರುನಾಡು, ಅದುವೇ ಕರ್ನಾಟಕ. ವಿಶಾಲವಾದ ಕರ್ನಾಟಕ ರಾಜ್ಯದಲ್ಲಿ 31 ಜಿಲ್ಲೆಗಳಿವೆ. ಅವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯೂ ಒಂದು, ಮಲೆನಾಡಿನಿಂದ (ದಟ್ಟವಾದ ಮರಗಳಿಂದ) ಕೂಡಿರುವ ಉತ್ತರ ಕನ್ನಡ ಜಿಲ್ಲೆಯು ಹನ್ನೊಂದು ತಾಲೂಕುಗಳನ್ನು ಒಳಗೊಂಡ ವಿಶಾಲವಾಧ ಜಿಲ್ಲೆಯಾಗಿದೆ. ಆದಿಯಲ್ಲಿ ಕುಂಬಾಪುರವೆಂದು ಕರೆಯಲ್ಪಟ್ಟ ಕುಮಟಾ ತಾಲೂಕು ತನ್ನದೆ ಆದ ವೈಶಷ್ಠ್ಯತೆ ಹೊಂದಿದೆ. ಇದು 40 ಮೈಲಿ (60 ಕಿ.ಮೀ.) ಕರಾವಳಿ ತೀರವನ್ನು ಹೊಂದಿದ್ದು, ಸೊಬಗಿನಿಂದ ಸದಾ ಪ್ರವಾಸಿಗರ / ಜನರ ಆಕರ್ಷಕ ಕೇಂದ್ರ ಬಿಂದುವಾಗಿದೆ.

ಇತಿಹಾಸ : ಬ್ರಿಟಿಷರ ಕಾಲದಲ್ಲಿ ಕುಮಟಾ ಪಟ್ಟಣವು ಮುಂಬೈ ಪ್ರಾಂತ್ಯದ ಅಡಿಯಲ್ಲಿ ಬರುತ್ತಿದ್ದು ಉತ್ತರ ಕನ್ನಡದ ಒಂದು ಭಾಗವಾಗಿತ್ತು. ಇಲ್ಲಿ ವಿಶೇಷವಾಗಿ ಹತ್ತಿ, ಗಂಧದ ಕೆತ್ತನೆ ಕೆಲಸ ಪ್ರಮುಖವಾಗಿದ್ದು ವ್ಯಾಪಾರ ವಹಿವಾಟಿನಲ್ಲೂ ಹೆಸರುವಾಸಿಯಾಗಿತ್ತು.

ಜನಸಂಖ್ಯಾ ಅಂಕಿ-ಅಂಶಗಳು : 2001 ಅಂಕಿ ಅಂಶದ ಪ್ರಕಾರ ಕುಮಟಾದ ಜನಸಂಖ್ಯೆಯು 27598 ಆಗಿರುತ್ತದೆ. ಇದರಲ್ಲಿ 51ಶೇ ಪುರಷರು 49 ಶೇ ಮಹಿಳೆಯರು ಇದ್ದು, ಸಾಕ್ಷರತೆ ಪ್ರಮಾಣ ಶೇ. 77 ರಷ್ಠು ಇದೆ. ಕುಮಟಾ ಪಟ್ಟಣದ ಜನರ ಪ್ರಮುಖ ಭಾಷೆ ಕನ್ನಡ ಹಾಗೂ ಕೊಂಕಣಿಯಾಗಿದೆ.

ವಾಣಿಜ್ಯ ಬೆಳವಣಿಗೆ : ಇಲ್ಲಿಲೆ, ಅಡಿಕೆ, ಗೇರು ಬೀಜ, ತೆಂಗಿನ ಕಾಯಿ ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಕುಮಟಾ ಪಟ್ಟಣವು ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಕೆಂದ್ರ ಸ್ಥಾನವಾಗಿದ್ದು ಇಲ್ಲಿ ನೂರು ವರುಷದ ಇತಿಹಾಸವುಳ್ಳ ಗಿಬ್ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಡಾ|| .ವಿ.ಬಾಳಿಗಾ ಕಾಲೇಜು, ಬಿಬಿಎ ಕಾಲೇಜು ಡಿ.ಇಡ್. ಕಾಲೇಜು, ಬಿ.ಇಡ್. ಕಾಲೇಜು, ಡಿಪ್ಲೋಮಾ ಕಾಲೇಜು ಹಾಗೂ ಎರಡು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ.

ಭಾಷೆ : ಇಲ್ಲಿಯ ಪ್ರಮುಖ ಭಾಷೆಯೆಂದರೆ ಕನ್ನಡ ಮತ್ತು ಕೊಂಕಣಿ ಯಾಗಿದೆ. ಬಹುತೇಕ ಜನಸಂಖ್ಯೆಯು ಹಿಂದುಗಳಾಗಿದ್ದು ಅದರಲ್ಲಿ ಹವ್ಯಕರು ನಾಡವರು ಗೌಡಸಾರಸ್ವತ ಬ್ರಾಹ್ಮಣರು, ಒಕ್ಕಲಿಗರು, ಶೇರುಗಾರರು, ಗಾಣಿಗ ಶೆಟ್ಟರು, ಹರಿಕಂತ್ರ, ಮುಸ್ಲಿಂ, ನಾಮಧಾರಿಗಳು ಕಂಡುಬರುತ್ತಾರೆ.

ಬೌಗೋಳಿಕ ಲಕ್ಷಣ : ಕುಮಟಾದಲ್ಲಿ ಸಾಕಷ್ಠು ಪ್ರೆಕ್ಷಣೀಯ ಸ್ಥಳಗಳಿವೆ ಪ್ರಮುಖವಾಗಿ ಯಾಣಾ, ಧಾರೇಶ್ವರ ಹಾಗೂ ಗೋಕರ್ಣ. ಗೋಕರ್ಣ ಕ್ಷೇತ್ರವು ಕುಮಟಾ ಪಟ್ಟಣದಿಂದ 20 ಕಿ.ಮೀ. ದೂರದಲ್ಲಿದ್ದು ವಿಶ್ವದಲ್ಲೇ ಪ್ರಸಿದ್ದಿ ಹೊಂದಿದೆ. ಯಾಣ ಕುಮಟಾದಿಂದ 29 ಕಿ.ಮೀ. ದೂರದಲ್ಲಿದೆ. ಇಲ್ಲಿನ ದೇವಸ್ಥಾನದ ವೈಶಿಷ್ಟತೆ ಏನೆಂದರೆ ದೇವಾಲಯ ಇರುವದು ಬೃಹದಾಕಾರದ ಬಂಡೆಗಲ್ಲ ಕೆಳಗಿರುತ್ತದೆ. ಇಲ್ಲಿ ಎರಡು ದೊಡ್ಡ ಹಾಗೂ ಇನ್ನೂ ಸುಮಾರು 62 ಚಿಕ್ಕ ಬಂಡೆಗಲ್ಲುಗಳಿದ್ದು ಪ್ರದೇಶದ ಮಣ್ಣು ಸ್ವಲ್ಪ ಕಪ್ಪು ಬಣ್ಣದಿಂದ ಕೂಡಿದೆ.

ಪುರಸಭೆ ಕುಮಟಾ : ಕುಮಟಾ ಪುರಸಭೆಯು ಸುಮಾರು 1893 ರಂದು ಸ್ಥಾಪನೆಗೊಂಡಿರುತ್ತದೆ. ಕುಮಟಾ ಪುರಸಭೆಯ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, 23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ . ಕುಮಟಾ ಪುರಸಭೆಯು ಕಾರವಾರದಿಂದ ಸುಮಾರು 60 ಕಿ.ಮೀ ದೂರದಲ್ಲಿದ್ದು ಸುಮಾರು 15.34 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಪುರಸಭೆಯಲ್ಲಿ ಕೆಳಕಂಡ ಯೋಜನೆಗಳು ಗಣಕೀಕರಣಗೊಳಿಸಲಾಗಿದೆ.

ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ಆನ್ ಲೈನ್ ಗೊಂಡಿದ್ದು ದಿನದ 24 ಘಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ , ದೂರವಾಣಿ ಮತ್ತು ಆನ್ ಲೈನ್ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ ಸಂಖ್ಯೆ : 08386-224550.

ಜನನ-ಮರಣ ಗಣಕೀಕರಣ ಜನನ-ಮರಣ ದಾಖಲೆಗಳು ಜನವರಿ 2008 ರಿಂದ ಆನ್ ಲೈನ್ ಗೊಂಡಿದ್ದು, ಪುರಸಭೆಯಲ್ಲಿ ಲಭ್ಯವಿರುವ 1960 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಪುರಸಭೆಯ ಅಧಿಕೃತ ಅಂತರ್ಜಾಲ ಮೂಲಕ ದಾಖಲೆಗಳನ್ನು ಪರಿಶೀಲಿಸಬಹುದು.

ಪುರಸಭೆಯ ವೆಬಸೈಟ್ ಸ್ಥಾಪಿತಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಎಲ್ಲಾ ಮಾಹಿತಿಯನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.


 

WEBSITE Maintained By. Megharaj N. Naik, Chief Officer, TMC Kumta

No. Of Visitors :
Last Updated   : 16/12/2014  Release History
Release 2.0.0, Powered By Karnataka Municipal Data Society & maintained by Kumata TMC
This website can best viewed with the resolution 1024 * 768 using Internet Explorer 7.0 or above.
Valid CSS!